ನಿನ್ನ ತಂದೆ ಸದಾ ಸಂಭ್ರಮ ನೀಡುವವರು ಪುಟಾಣಿ – ಮೇಘನಾ ವೀಡಿಯೋ

ಬೆಂಗಳೂರು: ಸ್ಯಾಂಡಲ್‍ವುಡ್ ನಟ, ಯುವ ಸಾಮ್ರಾಟ ಚಿರಂಜೀವಿ ಸರ್ಜಾ ಅವರದ್ದು ಇಂದು 36ನೇ ಹುಟ್ಟುಹಬ್ಬವಾಗಿದ್ದು, ತುಂಬು ಗರ್ಭಿಣಿ ಮೇಘನಾ ರಾಜ್ ಅವರು ನಿನ್ನೆಯೇ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ತಮ್ಮ ಇನ್‍ಸ್ಟಾ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಮೇಘನಾ, ನಿನ್ನ ತಂದೆ ಸದಾ ಸಂಭ್ರಮ ನೀಡುವವರು ಪುಟಾಣಿ ಎಂದು ಬರೆದುಕೊಂಡಿದ್ದಾರೆ. ಇದಕ್ಕೂ ಮೊದಲು ಜೂ. ಚಿರುವಿಗೆ ಸ್ವಾಗತ ಕೋರಿ ಕುಟುಂಬಸ್ಥರು ಮಾಡಿರುವ ವೀಡಿಯೋವನ್ನು ಕೂಡ ಮೇಘನಾ ಹಾಗೂ ಧ್ರುವ ಸರ್ಜಾ ಶೇರ್ ಮಾಡಿಕೊಂಡಿದ್ದರು.

ಚಿರು ನಿಧನರಾದ ನಂತರ ಇಂದು ಅವರ ಮೊದಲ ಹುಟ್ಟುಹಬ್ಬವಾಗಿದೆ. ಹೀಗಾಗಿ ನೆಲಗುಳಿಗ್ರಾಮದ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಕುಟುಂಬಸ್ಥರು ಚಿರು ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಚಿರಂಜೀವಿ ಸಮಾಧಿ ಬಳಿ ಚಿರಂಜೀವಿ ಸರ್ಜಾಯ ಅಜ್ಜಿ ಲಕ್ಷ್ಮಿ ದೇವಿ ಆಗಮಿಸಿ, ಮೊಮ್ಮಗನ ಸ್ಮಾರಕ್ಕೆ ಹೂವು ಹಾಕಿದ್ದಾರೆ.

ಚಿರು ಹುಟ್ಟುಹಬ್ಬದ ವಿಶೇಷವಾಗಿ ಕುಟುಂಬಸ್ಥರು ಸಾಕಷ್ಟು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದಾರೆ. ಸಮಾಧಿ ಬಳಿ ಪೂಜೆ ಹಾಗೂ ಅನ್ನದಾನ ಕಾರ್ಯಕ್ರಮ ನಡೆಸಲಿದ್ದಾರೆ. ಇನ್ನು ನೋವಿನಲ್ಲೇ ಖುಷಿಯನ್ನ ಕೂಡ ಬರಮಾಡಿಕೊಳ್ಳಲು ಸರ್ಜಾ ಫ್ಯಾಮಿಲಿ ಸಜ್ಜಾಗಿದೆ. ಚಿರು ಬರ್ತ್ ಡೇಗೆ ರಾಜಮಾರ್ತಾಂಡ ಚಿತ್ರತಂಡ ಗಿಫ್ಟ್ ನೀಡಿದೆ. ಹಿರೋ ಇಂಟ್ರೊಡಕ್ಷನ್ ಸಾಂಗ್ ರಿಲೀಸ್ ಆಗಿದೆ. ಜೊತೆಗೆ ಕ್ಷತ್ರಿಯ ಚಿತ್ರ ಟೀಸರ್ ಕೂಡ ಇಂದೇ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

 

View this post on Instagram

 

@shalinismakeupprofile @makeover_by_raghu_nagaraj_n @classycaptures_official

A post shared by Meghana Raj Sarja (@megsraj) on

ಚಿರಂಜೀವಿ ಸರ್ಜಾ(39) ಅವರು ಜೂನ್ 7ರಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಚಿರಂಜೀವಿ ಸರ್ಜಾ ಅವರಿಗೆ ಶನಿವಾರ ರಾತ್ರಿಯಿಂದ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಭಾನುವಾರ ಮಧ್ಯಾಹ್ನ 3:30ರ ಸುಮಾರಿಗೆ ಅಶೋಕಾ ಪಿಲ್ಲರ್ ಬಳಿ ಇರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.