ಎಚ್ಚರ: ಧರಿಸೋ ಮಾಸ್ಕ್ ನಿಂದ್ಲೂ ಬರ್ಬೋದು ಕೊರೊನಾ!

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲು ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಲಾಗಿದೆ. ಆದರೆ ಈ ಮಾಸ್ಕ್ ನಿಂದಲೂ ಕೊರೊನಾ ಹರಡುವ ಸಾಧ್ಯತೆಗಳಿವೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ.

ರಾಜ್ಯ ಸರ್ಕಾರ ಮಾಸ್ಕ್ ವಿಚಾರದಲ್ಲಿ ಕಠಿಣ ನಿರ್ಧಾರ ಕೈಗೊಂಡಿದೆ. ಮುಂಚೆ ಮಾಸ್ಕ್ ಇಲ್ಲದೇ ಓಡಾಟ ಮಾಡಿದರೆ 200 ರೂ. ಫೈನ್ ಹಾಕ್ತಿತ್ತು. ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗ್ತಿರೋದನ್ನ ಗಮನಿಸಿದ ಸರ್ಕಾರ 1000 ಫೈನ್ ಹಾಕಿದೆ. 1000 ರೂ ಫೈನ್ ಜಾಸ್ತಿ ಅಂತ ಜನ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ 250 ರೂಗಳಿಗೆ ದಂಡದ ದರವನ್ನ ಕಡಿಮೆ ಮಾಡಿದ್ರು. ಫೈನ್ ಕಡಿಮೆ ಆಗಿದ್ದು ಆಯ್ತು, ಈಗ ಯಾಕೆ ಮಾಸ್ಕ್ ವಿಚಾರ ಅಂದ್ರೆ ಮಾಸ್ಕ್ ಗಳ ಬಗ್ಗೆ ಆಸ್ಟ್ರೇಲಿಯಾ ತಜ್ಞರು ನಡೆಸಿರೋ ಅಧ್ಯಯನ ಶಾಕಿಂಗ್ ವಿಚಾರವೊಂದು ಬೆಳಕಿಗೆ ಬಂದಿದೆ.

ಹೌದು. ಮಾಸ್ಕ್ ಸ್ವಚ್ಛವಾಗಿರದಿದ್ದರೆ ಕೊರೊನಾ ಅಂಟಿಕೊಳ್ಳಬಹುದು. ಹೀಗಾಗಿ ಅನಿಯಮಿತವಾಗಿ ಮಾಸ್ಕ್ ಶುಚಿಗೊಳಿಸಿ. ಸದ್ಯಕ್ಕೆ ಹ್ಯಾಂಡ್‍ವಾಶ್ ಹಾಗೂ ಸ್ಯಾನಿಟೈಸೇ ಕೊರೊನಾಗೆ ವ್ಯಾಕ್ಸಿನ್ ಆಗಿದೆ. ಸ್ವಚ್ಛ ಇರದ ಮಾಸ್ಕ್ ನಿಂದಲೂ ಕೊರೊನಾ ಸೋಂಕು ಹರಡಬಹುದು. ವಾಶ್ ಮಾಡದ ಮಾಸ್ಕ್ ಸೋಂಕು ತಡೆಯೋ ಶಕ್ತಿ ಕಳೆದುಕೊಂಡಿರುತ್ತೆ.

ನೀವು ಬಳಸುವ ಬಟ್ಟೆ ಮಾಸ್ಕ್ ಅನ್ನು ಪ್ರತಿನಿತ್ಯವೂ ಬಿಸಿನೀರಿನಲ್ಲಿ ನೆನೆಸಿ, ಸೋಪ್ ಪೌಡರ್ ಹಾಕಿ ತೊಳೆಯಬೇಕು. 60 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿ ನೀರಿನಲ್ಲಿ ವಾಶ್ ಮಾಡಬೇಕು. ಬಟ್ಟೆ ಮಾಸ್ಕ್ ವಾಶ್ ಮಾಡದಿದ್ರೆ ಕೊರೊನಾ ವೈರಸ್ ಹರಡಬಹುದು. ಸರ್ಜಿಕಲ್ ಮಾಸ್ಕ್ ಆದರೆ ಒಮ್ಮೆ ಬಳಕೆ ಮಾಡಿದ ನಂತರ ಮರುಬಳಕೆ ಮಾಡದೆ ಬಿಸಾಡಬೇಕು.