ದಿನೇಶ್​ ಗುಂಡೂರಾವ್ ನೇತೃತ್ವದಲ್ಲಿಂದು ಮಾಜಿ IAS​ ಅಧಿಕಾರಿ ಸಸಿಕಾಂತ್ ಸೆಂಥಿಲ್ ಕಾಂಗ್ರೆಸ್​ ಸೇರ್ಪಡೆ

ಚೆನ್ನೈ: ಮಾಜಿ ಐಎಎಸ್​ ಅಧಿಕಾರಿ ಸಸಿಕಾಂತ್ ಸೆಂಥಿಲ್​ ಇಂದು ಕಾಂಗ್ರೆಸ್​ಗೆ​ ಸೇರ್ಪಡೆಯಾಗಲಿದ್ದಾರೆ. ತಮಿಳುನಾಡಿನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಸಸಿಕಾಂತ್ ಸೆಂಥಿಲ್ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯುವ ಸಾಧ್ಯತೆಗಳು ಕೂಡ ಇವೆ ಎನ್ನಲಾಗಿದೆ.

ತಮಿಳುನಾಡು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ದಿನೇಶ್​ ಗುಂಡೂರಾವ್ ಹಾಗೂ ರಾಜ್ಯ ಕಾಂಗ್ರೆಸ್​ ಅಧ್ಯಕ್ಷ ಕೆ.ಎಸ್​ ಅಳಗಿರಿ ಅವರ ನೇತೃತ್ವದಲ್ಲಿ ಸೆಂಥಿಲ್ ಪಕ್ಷವನ್ನ ಸೇರಲಿದ್ದಾರೆ ಎಂದು ತಿಳಿದುಬಂದಿದೆ. ಸಸಿಕಾಂತ್ ಸೆಂಥಿಲ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. 2019ರ ಸೆಪ್ಟೆಂಬರ್​ನಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.