ಪೊಲೀಸ್ ಬದಲಿಗೆ ಪುಲೀಶ್ ಅಂತ ಮೆಸೇಜ್ ಟೈಪ್ ಮಾಡಿ ಸಿಕ್ಕಿಬಿದ್ದ ಕಿಲ್ಲರ್
ಕಿಡ್ನಾಪರ್ ಓರ್ವ ತಪ್ಪು ತಪ್ಪಾಗಿ ಮೆಸೇಜ್ ಟೈಪ್ ಮಾಡಿದ್ದರಿಂದ ಪೊಲೀಸರಿಗೆ ಸಿಕ್ಕಿಬಿದ್ದ ಅಪರೂಪದ ಘಟನೆಯೊಂದು ನಡೆದಿದೆ. ರಾಮ್ ಪ್ರತಾಪ್ ಸಿಂಗ್ ಎಎಂಬಾತ 8 ವರ್ಷದ ಬಾಲಕೋರ್ವನನ್ನ ಅಕ್ಟೋಬರ್ ತಿಂಗಳಲ್ಲಿ ಅವರ ಅಜ್ಜಿಯ ಮನೆಯ ಬಳಿ ಓರ್ವ ಕಿಡ್ನ್ಯಾಪರ್ ಕಿಡ್ನ್ಯಾಪ್ ಮಾಡಿದ್ದಾನೆ. ಅದೇ ದಿನ ಹುಡುಗನ ತಂದೆಗೆ ತಾನು ಕದ್ದ ಮೊಬೈಲ್ ಫೋನ್ ಒಂದರಿಂದ 2 ಲಕ್ಷ ಹಣ ನೀಡುವಂತೆ ಮೆಸೇಜ್ ಮಾಡಿದ್ದಾನೆ. ಆ ಮೆಸೇಜ್ನಲ್ಲಿ ಆತ ಸಿತಾಪುರಕ್ಕೆ ಎರಡು ಲಕ್ಷ ತಗೊಂಡು ಬನ್ನಿ, ಪೊಲೀಸರಿಗೆ ಹೇಳುವಂತಿಲ್ಲ, ಹೇಳಿದರೆ ನಿಮ್ಮ ಮಗನನ್ನ ಕೊಲೆ ಮಾಡುತ್ತೇನೆ ಎಂದಿದ್ದಾನೆ. ಆದರೆ sitapur ಎಂದು ಟೈಪ್ ಮಾಡುವಲ್ಲಿ seeta-pur ಮತ್ತು police ಎಂದು ಬರೆಯುವಲ್ಲಿ pulish ಎಂದು ತಪ್ಪಾಗಿ ಟೈಪ್ ಮಾಡಿ ಮೆಸೇಜ್ ಮಾಡಿದ್ದಾನೆ.
ಇತ್ತ ತನಗೆ ಮೆಸೇಜ್ ಬಂದಿದ್ದನ್ನ ನೋಡಿದ ತಂದೆ ಗಾಬರಿಗೊಂಡು ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟಿದ್ದಾರೆ. ತಕ್ಷಣವೇ ಪೊಲೀಸರು ಹಲವು ಟೀಮ್ಗಳನ್ನು ರಚಿಸಿ ಕಿಡ್ನ್ಯಾಪರ್ ಬೆನ್ನು ಹತ್ತಿದ್ದಾರೆ. ಸಿಸಿಟಿವಿ ಫೂಟೇಜ್, ಹಾಗೂ ಸಿಕ್ಕ ಮಾಹಿತಿ ಆಧರಿಸಿ 10 ಮಂದಿಯನ್ನ ಪೊಲೀಸ್ ಸ್ಟೇಷನ್ಗೆ ಕರೆತಂದಿದ್ದಾರೆ.
ಅಷ್ಟೇ ಅಲ್ಲದೆ ಕಿಡ್ನ್ಯಾಪ್ ಆದ ಮಗುವಿನ ತಂದೆಗೆ ಮೆಸೇಜ್ ಬಂದ ನಂಬರ್ಗೆ ಪೊಲೀಸರು ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿದೆ. ಈ ಹಿನ್ನೆಲೆ ಸೈಬರ್ ಸಹಾಯ ಪಡೆದು ಪೊಲೀಸರು ಯಾರ ಹೆಸರಿನಲ್ಲಿ ಸಿಮ್ ಖರೀದಿಯಾಗಿದೆ ಎಂಬುದನ್ನು ಪತ್ತೆಹಚ್ಚಿ ಆತನನ್ನ ಪ್ರಶ್ನಿಸಿದ್ದಾರೆ. ಆದರೆ ಆತ ತನ್ನ ಫೋನ್ ಕಳ್ಳತನವಾಗಿದೆ ಎಂದಿದ್ದಾನೆ.
ಇತ್ತ ಪೊಲೀಸರು ಅನುಮಾನಾಸ್ಪದವಾಗಿ ಪೊಲೀಸ್ ಸ್ಟೇಷನ್ಗೆ ಕರೆತಂದವರಲ್ಲಿಯೇ ಕಿಡ್ನ್ಯಾಪರ್ ಇರಬೇಕು ಎಂಬ ಅನುಮಾನ ಶುರುವಾಗಿದೆ. ಈ ಹಿನ್ನೆಲೆ ಅವರಿಗೆ I want a police job. I can run from Hardoi to Sitapur.. ನನಗೆ ಪೊಲೀಸ್ ಕೆಲಸ ಬೇಕು.. ನಾನು ಸಿತಾಪುರ್ನಿಂದ ಹರ್ದೋಯಿವರೆಗೆ ಓಡಬಲ್ಲೆ ಅಂತ ಬರೆಯೋಕೆ ಹೇಳಿದ್ದಾರೆ. ಈ ವೇಳೆ ಓರ್ವ ಮಾತ್ರ police ಬದಲಿಗೆ pulish, ಮತ್ತು sitapur ಬದಲಿಗೆ seeta-pur ಅಂತ ಬರೆದಿದ್ದಾನೆ. ಹೀಗೆ ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡಿದ್ದವನನ್ನ ವಿಚಾರಿಸಿದಾಗ ಆತ ತಾನೇ ಕಿಡ್ನ್ಯಾಪರ್, ಅಲ್ಲದೇ ತಾನು ಕಿಡ್ನ್ಯಾಪ್ ಮಾಡಿದ ಹುಡುಗನನ್ನ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.