ಕೊರೊನಾ ಮಹಾಮಾರಿ ಇಡೀ ವಿಶ್ವವನ್ನೇ ನಲುಗಿಸಿದೆ. ಎಲ್ಲಾ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿರೋ ಈ ಕಣ್ಣಿಗೆ ಕಾಣದ ಜೀವಿಯಿಂದ ಕ್ರೀಡಾ ಕ್ಷೇತ್ರವೂ ಹೊರತಾಗಿಲ್ಲ. ಇದೀಗ ಎಲ್ಲರೂ ಬಹು ನಿರೀಕ್ಷೆಯಿಂದ ಕಾಯ್ತಾ ಇರೋ ಇಂಡೋ-ಆಸಿಸ್ ಹೈವೋಲ್ಟೆಜ್ ಫೈಟ್ ಮೇಲೂ ಕೊರೊನಾ ಕರಿಛಾಯೆ ಮೂಡಿದೆ.
ಅಡಿಲೇಡ್ನಲ್ಲಿ ಪಿಂಕ್ ಬಾಲ್ ಟೆಸ್ಟ್ ಅನುಮಾನ
ಭಾರತ- ಆಸ್ಟ್ರೇಲಿಯಾ ಹೈವೋಲ್ಟೆಜ್ ಟೆಸ್ಟ್ ಸರಣಿಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಅದರಲ್ಲೂ ಅಡಿಲೇಡ್ನಲ್ಲಿ ನಡೆಯಲಿರೋ ಮೊದಲ ಟೆಸ್ಟ್ ಪಂದ್ಯವಂತೂ ಉಭಯ ತಂಡಗಳಿಗೆ ಪ್ರತಿಷ್ಠೆಯ ಕಣ. ಇದು ಟೀಮ್ ಇಂಡಿಯಾ ವಿದೇಶಿ ಪಿಚ್ನಲ್ಲಿ ಮೊದಲ ಬಾರಿ ಆಡ್ತಾ ಇರೋ ಡೇ ಆಯಂಡ್ ನೈಟ್ ಟೆಸ್ಟ್. ಈಗಾಗಲೇ ಗೆಲುವಿಗೆ ಪಣ ತೊಟ್ಟಿರೋ ತಂಡಗಳು ಅಡಿಲೇಡ್ ಪಿಚ್ ಗಮನದಲ್ಲಿಟ್ಟುಕೊಂಡು ಗೇಮ್ಪ್ಲಾನ್, ಸ್ಟಾರ್ಟಜಿಗಳ ಬಗ್ಗೆ ಗಮನಹರಿಸಿವೆ. ಈಗ ನೋಡಿದ್ರೆ ಅಡಿಲೇಡ್ನಲ್ಲಿ ಪಂದ್ಯ ನಡೆಯೋದೆ ಅನುಮಾನವಾಗಿದೆ.
ಹೌದು. ಕೊರೊನಾ ಮಹಾಮಾರಿ ಮೊದಲ ಟೆಸ್ಟ್ ಪಂದ್ಯಕ್ಕೆ ಕಂಟಕವಾಗಿ ಪರಿಣಮಿಸಿದೆ. ಅಡಿಲೇಡ್ನಲ್ಲಿ ಆಯೋಜನೆಯಾಗಿರೂ ಈ ಪಂದ್ಯ ನಡೆಯೋದೇ ಅನುಮಾನವಾಗಿದೆ. ಕಳೆದ ಏಪ್ರಿಲ್ನಿಂದ ಕೊರೊನಾ ಪ್ರಕರಣಗಳೇ ದಾಖಲಾಗದ ಇಲ್ಲಿ ಕಳೆದ 2 ದಿನಗಳಲ್ಲಿ 17 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇದೇ ಕಾರಣಕ್ಕೆಅಡಿಲೇಡ್ನಲ್ಲಿ ಪಂದ್ಯ ಆಯೋಜನೆಯೂ ಡೌಟ್ ಆಗಿದೆ.
17 ಪ್ರಕರಣಗಳು ದಾಖಲಾದ ಬೆನ್ನಲ್ಲೆ ಎಚ್ಚೆತ್ತುಕೊಂಡಿರುವ ಸೌತ್ ಆಸ್ಟ್ರೇಲಿಯಾ ಸರ್ಕಾರ ಗಡಿ ನಿರ್ಭಂದ ವಿಧಿಸಲು ಮುಂದಾಗಿದೆ. ಡಿಸೆಂಬರ್ 17ರಂದು ಪಂದ್ಯ ಆಯೋಜನೆಯಾಗಿದ್ರೂ, ಟೂರ್ ಪ್ಲಾನ್ ಪ್ರಕಾರ ಎರಡೂ ತಂಡಗಳು ಡಿಸೆಂಬರ್ 10ಕ್ಕೆ ಅಡಿಲೇಡ್ಗೆ ತೆರಳಲಿವೆ. ಅದರೊಳಗೆ ಸೌತ್ ಆಸ್ಟ್ರೇಲಿಯಾ ಗಡಿ ನಿರ್ಬಂಧವನ್ನ ಸಡಿಲಿಸದಿದ್ದರೆ ಅಡಿಲೇಡ್ನಲ್ಲಿ ಟೆಸ್ಟ್ ನಡಿಯಲ್ಲ.
ಹೋಮ್ ಕ್ವಾಂರಟೀನ್ನಲ್ಲಿ ಆಸಿಸ್ ಟೆಸ್ಟ್ ಕ್ಯಾಪ್ಟನ್
ಮೊದಲ ಟೆಸ್ಟ್ ಪಂದ್ಯಕ್ಕೆ ಅಡಿಲೇಡ್ ಆತಿಥ್ಯ ವಹಿಸೋದು ಅನುಮಾನ ಅನ್ನೋದು ಒಂದೆಡೆಯಾದ್ರೆ, ತಂಡದ ಆಟಗಾರರೇ ಹೋಮ್ ಕ್ವಾರಂಟೀನ್ಗೆ ಒಳಗಾಗ್ತಾ ಇರೋದು ಕ್ರಿಕೆಟ್ ಆಸ್ಟ್ರೇಲಿಯಾಗೆ ತಲೆ ನೋವಾಗಿದೆ. ಕೆಲ ದಿನಗಳ ಹಿಂದೆ ಶೆಫೀಲ್ಡ್ ಶಿಲ್ಡ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಆಟಗಾರರು ಕ್ವಾರಂಟೀನ್ಗೆ ಒಳಪಡಬೇಕಿದೆ. ಈಗಾಗಲೇ ಟೆಸ್ಟ್ ತಂಡದ ನಾಯಕ ಟಿಮ್ ಫೈನ್, ಕೀಪರ್ ಮ್ಯಾಥ್ಯೂ ವೇಡ್ ಹೋಮ್ ಕ್ವಾರಂಟೀನ್ನಲ್ಲಿದ್ದಾರೆ. ಇದೂ ಆಸಿಸ್ ಪಾಳಯಕ್ಕೆ ತಲೆನೋವಾಗಿದೆ.
ಅಸ್ಟನ್ ಅಗರ್, ಕ್ಯಾಮರೂನ್ ಗ್ರೀನ್ಗೂ ಕ್ವಾರಂಟೀನ್
ಸ್ಟಿನ್ನರ್ ಅಸ್ಟನ್ ಅಗರ್, ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಕೂಡ ಶೆಫೀಲ್ಡ್ ಶಿಲ್ಡ್ ಟೂರ್ನಿಯ ಭಾಗವಾಗಿದ್ರು. ಹೀಗಾಗಿ ಈ ಆಟಗಾರರೂ ಹೋಮ್ ಐಸೋಲೆಷನ್ಗೆ ಒಳಗಾಗಬೇಕಿದೆ. ಏಕದಿನ, ಟಿ-20 ಸರಣಿಯ ತಂಡದ ಭಾಗವಾಗಿರೂ ಇವರು 14 ದಿನಗಳ ಕ್ವಾರಂಟೀನ್ಗೆ ಒಳಾಗಾದ್ರೆ, ಆರಂಭಿಕ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಇವರಿಷ್ಟೇ ಅಲ್ಲ.. ಸ್ಪಿನ್ ಮಾಂತ್ರಿಕ ನಥಾನ್ ಲಯನ್ ಕೂಡ ಕೆಲ ದಿನಗಳ ಹಿಂದೆ ಸೌತ್ ಆಸ್ಟ್ರೇಲಿಯಾಗೆ ಭೇಟಿ ನೀಡಿದ್ರು. ಅಂದು ಸ್ನೇಹಿತರ ಮನೆಗೆ ತೆರಳಿದ್ದ ಇವರು ಈಗ ಕ್ವಾರಂಟೀನ್ಗೆ ಒಳಗಾಗಿದ್ದಾರೆ ಎಂಬ ಮಾಹಿತಿಯಿದೆ.
ಒಂದು ವೇಳೆ ಅಡಿಲೇಡ್ ಮೈದಾನ ಅಲಭ್ಯವಾದ್ರೆ ಅಥವಾ ಕ್ವಾರಂಟೀನ್ನಲ್ಲಿರೊ ಆಟಗಾರರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟರೆ ಆಸಿಸ್ ಕ್ರಿಕೆಟ್ ಮಂಡಳಿಯ ನಡೆ ಏನು ಅನ್ನೋದೇ ಸದ್ಯದ ಕುತೂಹಲ.