ಮೇಘನಾ ರಾಜ್​ ಮತ್ತು ಸರ್ಜಾ ಕುಟುಂಬಕ್ಕೆ ಮತ್ತೊಂದು ಆಘಾತ..!

ಬೆಂಗಳೂರು: ಮೇಘನಾ ರಾಜ್ ಹಾಗೂ ಸರ್ಜಾ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಮೇಘನಾ ಸೇರಿದಂತೆ ಇಡೀ ಕುಟುಂಬಕ್ಕೆ ಕರೊನಾ ಸೋಂಕು ತಗುಲಿದೆ. ಚಿರು ಪುತ್ರನಿಗೂ ಸೋಂಕು ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ.

ಸೋಂಕು ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆಯೇ ಪ್ರಮೀಳಾ ಜೋಷಾಯ್ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದಾದ ಬೆನ್ನಲ್ಲೇ ಸುಂದರ್ ರಾಜ್, ಮೇಘನಾ ಮತ್ತು ಚಿರು ಪುತ್ರನಿಗೂ ಸೋಂಕು ತಗುಲಿದೆ. ಮೇಘನಾ ಮನೆಯಲ್ಲೇ ಕ್ವಾರಂಟೈನ್ ಆಗಿದ್ದು, ಸುಂದರ್​ ರಾಜ್​ ಸಹ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಯಾವುದೇ ರೋಗ ಲಕ್ಷಣಗಳು ಇಲ್ಲದಿರುವುದರಿಂದ ಕೆಲವು ದಿನಗಳಿಂದ ಮೇಘನಾ ಮತ್ತು ಮಗುವಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಸುಂದರ್​ ರಾಜ್​ ಮತ್ತು ಪ್ರಮಿಳಾ ಜೋಷಾಯ್​ ಹಿರಿಯವರಾಗಿರುವುದಿಂದ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿರುವುದಾಗಿ ಸುಂದರ್ ರಾಜ್​ ತಿಳಿಸಿದ್ದಾರೆ. ​

ಕೆಲ ದಿನಗಳ ಹಿಂದೆ ನಟ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾಗೂ ಕರೊನಾ ಸೋಂಕು ತಗುಲಿತ್ತು. ಚಿಕಿತ್ಸೆ ಪಡೆದು ಇಬ್ಬರು ಗುಣಮುಖರಾಗಿದ್ದರು. ಇದೀಗ ಸರ್ಜಾ ಕುಟುಂಬದಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡಿರುವ ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಮಗುವಿಗೂ ಸಹ ಸೋಂಕು ತಗುಲಿರುವುದು ಆಘಾತವಾಗಿದೆ. (ದಿಗ್ವಿಜಯ ನ್ಯೂಸ್​)

ಅನಸೂಯ ಈಗ ಸಿಲ್ಕ್; ಸ್ಮಿತಾ ಕುರಿತು ಇನ್ನೊಂದು ಬಯೋಪಿಕ್?