ಟ್ರಂಪ್​​ ನನ್ನ ತಂದೆ ಎಂದಿದ್ದ ಪಾಕ್‌ ಯುವತಿ ವಿಡಿಯೋ ಮತ್ತೆ ವೈರಲ್

ಅಮೆರಿಕ ಅಧ್ಯಕ್ಷೀಯ ಚುನಾವಣೆ 2020ರಲ್ಲಿ ಸೋಲನ್ನುಂಡಿರುವ ಡೊನಾಲ್ಡ್ ಟ್ರಂಪ್​ ಒಂದಿಲ್ಲೊಂದು ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗ್ತಾನೇ ಇರ್ತಾರೆ. ಇದೀಗ ಪಾಕಿಸ್ತಾನದ ಮಹಿಳೆಯೊಬ್ಬಳು ಟ್ರಂಪ್​ ತನ್ನ ತಂದೆ ಎಂದು ಹೇಳಿಕೊಳ್ಳುತ್ತಿರುವ ಹಳೆಯ ವಿಡಿಯೋವೊಂದು ವೈರಲ್​ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಈ ವಿಡಿಯೋದಲ್ಲಿ ಬುರ್ಕಾಧಾರಿ ಮಹಿಳೆ, ಡೊನಾಲ್ಡ್ ಟ್ರಂಪ್​ ನನ್ನ ನಿಜವಾದ ತಂದೆ. ನಾನು ನನ್ನ ತಂದೆಯನ್ನ ಭೇಟಿಯಾಗಲು ಬಯಸುತ್ತೇನೆ ಎಂದು ವರದಿಗಾರರ ಬಳಿ ಹೇಳಿಕೊಳ್ಳುತ್ತಿರೋದನ್ನ ಕಾಣಬಹುದಾಗಿದೆ.

ನನ್ನ ತಂದೆಯಾದ ಟ್ರಂಪ್​ ನನ್ನ ತಾಯಿ ಬಳಿ ಮಗಳನ್ನ ನೋಡಿಕೊಳ್ಳೋದಿಲ್ಲ ಎಂದು ಹೇಳಿದ್ದರು. ಅಲ್ಲದೇ ಈ ವಿಚಾರಕ್ಕಾಗಿ ನನ್ನ ತಾಯಿ ಹಾಗೂ ಟ್ರಂಪ್​ ನಡುವೆ ಹಲವು ಭಾರಿ ಜಗಳ ಆಗಿದೆ ಎಂದು ಹೇಳಿದ್ದಾಳೆ.

ಡಿಸೆಂಬರ್​ 2018ರ ಈ ವಿಡಿಯೋ ಇದೀಗ ಮತ್ತೆ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡ್ತಿದೆ. ಈ ವಿಡಿಯೋ ಹಂಚಿಕೊಳ್ಳುತ್ತಿರುವ ನೆಟ್ಟಿಗರು ಟ್ರಂಪ್​ ಕಾಲೆಳೆಯೋ ಕೆಲಸ ಮಾಡ್ತಿದ್ದಾರೆ. ಆದರೆ ಅಧಿಕೃತ ಮಾಹಿತಿ ಪ್ರಕಾರ ಇವಾಂಕಾ ಟ್ರಂಪ್, ಡೊನಾಲ್ಡ್ ಟ್ರಂಪ್​ ಜ್ಯೂನಿಯರ್​, ಬ್ಯಾರೋನ್​ ಟ್ರಂಪ್​, ಎರಿಕ್​ ಟ್ರಂಪ್​ ಹಾಗೂ ಟಿಫಾನಿ ಟ್ರಂಪ್​​ ಎಂಬವರು ಡೊನಾಲ್ಡ್ ಟ್ರಂಪ್​ರ ಮಕ್ಕಳಾಗಿದ್ದಾರೆ.