ಪೆಟ್ರೋಲ್ ದರ ಲೀಟರ್ ಗೆ ಗರಿಷ್ಠ ರೂ. 40 ಆಗಬೇಕು: ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಸುಬ್ರಮಣಿಯನ್ ಸ್ವಾಮಿ

ಹೊಸದಿಲ್ಲಿ : ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಮತ್ತೊಮ್ಮೆ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ. ದೇಶದಲ್ಲಿ ಇಂಧನ ಬೆಲೆಗಳಲ್ಲಾಗಿರುವ ವಿಪರೀತ ಏರಿಕೆ ಕುರಿತಂತೆ ಅವರು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ಪೆಟ್ರೋಲ್ ದರ ಲೀಟರ್ ಗೆ ರೂ. 90 ಆಗಿರುವುದು ಸರಕಾರದಿಂದ ದೇಶದ ಜನರ ದೊಡ್ಡ ಶೋಷಣೆ. ಪೆಟ್ರೋಲ್‍ನ ಎಕ್ಸ್-ರಿಫೈನರಿ ದರ ಲೀಟರ್ ಗೆ ರೂ. 30 ಆಗಿದೆ. ಎಲ್ಲಾ ವಿಧದ ತೆರಿಗೆಗಳು ಹಾಗೂ ಪೆಟ್ರೋಲ್ ಪಂಪ್ ಕಮಿಷನ್ ಎಲ್ಲಾ ಸೇರಿ ಉಳಿದ ರೂ. 60 ವೆಚ್ಚ ಆಗುತ್ತದೆ. ನನ್ನ ಪ್ರಕಾರ ಪೆಟ್ರೋಲ್ ಗರಿಷ್ಠ ರೂ. 40 ಆಗಬೇಕು,” ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.