ಭಾರತಕ್ಕೆ ಮರಳಲಿದೆ PUBG: ಕಂಪನಿ ಘೋಷಣೆ

ನವದೆಹಲಿ : ಪಬ್ ಜಿ ಪ್ರಿಯರಿಗೆ ಗುಡ್ ನ್ಯೂಸ್. ಭಾರತೀಯರಿಗಾಗಿ ಹೊಸ ಅವತಾರದಲ್ಲಿ ಪಬ್ ಜಿ ಮತ್ತೆ ರೀ ಲಾಂಚ್ ಆಗಲಿದೆ. ಪಬ್ ಜಿ ಮುಬೈಲ್ ಇಂಡಿಯಾ ಹೆಸರಿನಲ್ಲಿ ಶೀಘ್ರದಲ್ಲಿ ಭಾರತದಲ್ಲಿ ಲಾಂಚ್ ಆಗಲಿದೆ ಎಂದು ಪಬ್ ಬಿ ಕಾರ್ಪೋರೇಷನ್ ಅಧಿಕೃತವಾಗಿ ಪ್ರಕಟನೆ ಮಾಡಿದೆ.

ಭಾರತೀಯರಿಗಾಗಿ ‘ಪಬ್ ಜಿ ಮೊಬೈಲ್ ಇಂಡಿಯಾ’ ಗೇಮಿಂಗ್ ಆಪ್ ತಯಾರಿಸುತ್ತಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಹೊಸ ಪಬ್ ಜಿಯನ್ನು ಭಾರತೀಯರಿಗಾಗಿಯೇ ತಯಾರಿಸಿರುವ ಹಿನ್ನೆಲೆಯಲ್ಲಿ ಇಲ್ಲಿನ ಗ್ರಾಹಕರಿಗೆ ಸರಿಹೊಂದುವಂತೆ ಕೆಲವು ಸುಧಾರಣೆಗಳನ್ನು ತರಲಾಗಿದೆ.

ಹೊಸ ಪಾತ್ರಗಳು, ಹೆಚ್ಚು ನೈಸರ್ಗಿಕತೆನ್ನು ಅಳವಡಿಸಲಾಗಿದೆ. ಜೊತೆಗೆ ಭಾರತದ ವಿವಿಧ ಕ್ಷೇತ್ರಗಳಲ್ಲಿ 100 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಪಬ್ ಜಿ ಕಾರ್ಪೊರೇಷನ್ ತಿಳಿಸಿದೆ.

 

ಸರ್ಕಾರದ ನಿಯಮಗಳಿಗೆ ಅನುಗಣವಾಗಿ ಸುರಕ್ಷಿತ, ಆರೋಗ್ಯಕರವಾಗಿ ಹೊಸ ವರ್ಷನ್ ಗೇಮ್ ಪ್ಲಾನ್ ಅನ್ನು ಬಳಕೆದಾರರಿಗೆ ನೀಡುವುದಾಗಿ ಕಂಪನಿ ತಿಳಿಸಿದೆ.

ಚೀನಾ ಮತ್ತು ಭಾರತ ನಡುವೆ ಬಿಕ್ಕಟ್ಟು ಹೆಚ್ಚಾದ ಬೆನ್ನಲ್ಲೇ ಚೀನಾ ಮೂಲದ 117 ಆಪ್‍ಗಳನ್ನು ಸೆಪ್ಟೆಂಬರ್ ನಲ್ಲಿ ನಿಷೇಧಿಸಲಾಗಿತ್ತು. ಪಬ್ ಜಿಯನ್ನು ಪ್ಲೇಸ್ಟೋರ್ ನಿಂದ ತೆಗೆದುಹಾಕಲಾಗಿತ್ತು.