VIDEO| ಈ ರೀತಿಯ ಮ್ಯಾಜಿಕ್ ಶೋ​ ನೀವು ಖಂಡಿತ ನೋಡಿರುವುದಿಲ್ಲ, ಮಿಸ್​ ಮಾಡ್ಬೇಡಿ!

ನವದೆಹಲಿ: ತಮ್ಮ ಪ್ರತಿಭೆಗಳನ್ನು ತೋರಲು ಅವಕಾಶಕ್ಕಾಗಿ ಕಾಯುತ್ತಿದ್ದ ಕಾಲವೊಂದಿತ್ತು. ಆದರೀಗ ಆಗಿಲ್ಲ. ಸಾಮಾಜಿಕ ಜಾಲತಾಣ ಬಂದಾಗಿನಿಂದ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಪ್ರತಿಭೆ ಎಲ್ಲರ ಮುಂದೆ ಕ್ಷಣಾರ್ಧದಲ್ಲಿ ಅನಾವರಣಗೊಳ್ಳುತ್ತಾರೆ.

ವ್ಲಾಗ್ಗರ್ಸ್, ಬ್ಲಾಗರ್ಸ್​ ಅಥವಾ ಟಿಕ್​ಟಾಕ್​ ಬಳಕೆದಾರರಾಗಿರಲಿ ತಮ್ಮ ವಿನೂತನ ವಿಷಯದ ಮೂಲಕವೇ ಸೆಲಿಬ್ರೆಟಿಗಳಾಗಿಬಿಡುತ್ತಾರೆ. ಅಂಥದ್ದೆ ಒಂದು ಪ್ರಕರಣದಲ್ಲಿ ನಾಲ್ವರು ಯುವತಿಯರು ತಮ್ಮ ಮುಖಭಾವದಿಂದಲೇ ಕ್ಷಣಾರ್ಧದಲ್ಲಿ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

ಯುವತಿಯರ ಟಿಕ್​ಟಾಕ್​ ವಿಡಿಯೋವೊಂದು ವೈರಲ್​ ಆಗಿದ್ದು, ಅವರ ಮುಖಭಾವಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಯುವತಿಯರು ಮ್ಯಾಜಿಕ್​ ಶೋ ಒಂದನ್ನು ಹಾಸ್ಯಸ್ಪದವಾಗಿ ಪುನರಾವರ್ತಿಸಿದ್ದು, ಅವರ ಮುಖಭಾವವನ್ನು ಹೊಗಳಲು ಪದಗಳೇ ಸಾಲದು ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೆಂಥಾ ಮ್ಯಾಜಿಕ್​? ಯುವತಿಯರ ಮುಖಭಾವ ಅಷ್ಟೊಂದು ಆಕರ್ಷಣೆ ಹೊಂದಿದೆಯಾ ಎಂಬ ಕುತೂಹಲವಿದ್ದರೆ, ಈ ಕೆಳಗಿನ ವಿಡಿಯೋವನ್ನೊಮ್ಮೆ ನೋಡಿಬಿಡಿ.

ಇನ್ನು ಈ ವಿಡಿಯೋವನ್ನು ಶನಿವಾರವಷ್ಟೇ ಟ್ವಿಟರ್​ನಲ್ಲಿ ಶೇರ್​ ಮಾಡಲಾಗಿದ್ದು, ಅತಿ ಕಡಿಮೆ ಸಮಯದಲ್ಲಿ ಭಾರಿ ವೈರಲ್​ ಆಗಿದೆ. ಈಗಾಗಲೇ 84 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, 4 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಸ್​ ಮಾಡಿದ್ದಾರೆ.