ಇಂದಿನಿಂದ WhatsApp ಮೂಲಕ ಯುಪಿಐ ಪೇಮೆಂಟ್ ಮಾಡಬಹುದು
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆಯಪ್ನಲ್ಲಿ ಯುಪಿಐ(Unified Payments Interface) ಮೂಲಕ ಹಣ ಪಾವತಿ ಸೇವೆ ನೀಡಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ(ಎನ್ಪಿಸಿಐ) ಅನುಮತಿ ನೀಡಿದೆ.
ಈಗಾಗಲೇ ಯುಪಿಐ ಮೂಲಕ ಪೇಮೆಂಟ್ಸ್ ಸೇವೆಯನ್ನ ಒದಗಿಸುತ್ತಿರುವ ಗೂಗಲ್ ಪೇ, ಪೇಟಿಎಂ, ಫೋನ್ ಪೇ ರೀತಿಯಲ್ಲೇ ವಾಟ್ಸ್ಆಯಪ್ ಪೇಮೆಂಟ್ ಆಯ್ಕೆ ಮೂಲಕ ಯುಪಿಐ ಐಡಿ ಬಳಸಿ ಹಣ ವರ್ಗಾವಣೆ ಮಾಡಬಹುದಾಗಿದೆ.
ವಾಟ್ಸ್ಆಯಪ್ ಯುಪಿಐ ಚೌಕಟ್ಟಿನಲ್ಲಿ ಶ್ರೇಣೀಕೃತ ರೀತಿಯಲ್ಲಿ ಸೇವೆಯನ್ನ ನೀಡಬಹುದು ಎಂದು ಎನ್ಪಿಸಿಐ ತಿಳಿಸಿದೆ. ಮೊದಲ ಹಂತದಲ್ಲಿ, ತನ್ನ 2 ಕೋಟಿ ಬಳಕೆದಾರರಿಗೆ ಸೇವೆಯನ್ನ ವಿಸ್ತರಿಸಬಹುದು ಎಂದು ಹೇಳಿದೆ. ವಾಟ್ಸ್ಆಯಪ್ ಭಾರತದಲ್ಲಿ ಸುಮಾರು 40 ಕೋಟಿ ಬಳಕೆದಾರರನ್ನು ಹೊಂದಿದೆ.
ವಾಟ್ಸ್ಆಯಪ್ ಬೀಟಾ ವರ್ಷನ್ನಲ್ಲಿ ಸುಮಾರು 10 ಲಕ್ಷ ಬಳಕೆದಾರರಿಗೆ ಈಗಾಗಲೇ ವಾಟ್ಸ್ಆಯಪ್ ಪೇಮೆಂಟ್ ಸೇವೆಯ ಫೀಚರ್ ನೀಡಲಾಗಿತ್ತು. ಈಗ ಅದು ಇತರೆ ಬಳಕೆದಾರರಿಗೂ ಲಭ್ಯವಾಗಲಿದೆ.